ತೋಲೈಟ್	-
 ಪ್ಲೇಜಿಯೋಕ್ಲೇಸ್, ಆಗೈಟ್, ನಿಕೃಷ್ಟ ಪ್ರಮಾಣದಲ್ಲಿ ಆಲಿವಿನ್ (ಕೆಲವೊಮ್ಮೆ ಆಲಿವಿನ್ ಇಲ್ಲದ) ಖನಿಜ ಸಂಯೋಜನೆ ಇರುವ ಅಗ್ನಿಶಿಲೆಗೆ ರೋಸನ್‍ಬುಷ್ ನೀಡಿದ ಹೆಸರು. ಅಧಿಕ ಸುಣ್ಣದಿಂದ ಕೂಡಿದ ಸಂತೃಪ್ತ ಬಸಾಲ್ಟ್ ಶಿಲೆಗಳಿಗೂ ಈ ಹೆಸರು ಈಗ ಅನ್ವಯಿಸುತ್ತದೆ. ಇಂಥ ಬಸಾಲ್ಟುಗಳಲ್ಲಿ ಹೆಚ್ಚು ಕ್ಯಾಲ್ಸಿಯಮ್ಮಿನಿಂದ ಕೂಡಿದ ಫೆಲ್ಡ್‍ಸ್ಟಾರ್ ದೊಡ್ಡ ಅರಳಿನ ರೂಪದಲ್ಲಿ ದೊರೆಯುತ್ತದೆ. (ಟಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ